Monday, February 22, 2010

ನಾನೇಕೆ ಬರೆಯುವೆ?

ಬರಹಗಳ ಉಪಯೋಗಗಳು ನೂರಾರು. ಮನುಷ್ಯನಿಗೆ ದಾರಿ ದಿವಿಟಿಗೆಯನ್ನು ಹಿಡಿದು ಕೆಲವು ಬರಹಗಳು ನಿಂತರೆ, ಬುದ್ದಿಯನ್ನು ಹರಿತು ಮಾಡಲು ಚೂಪಾದ ಕತ್ತಿಯಂತೆ ಇನ್ನು ಕೆಲವು . ಹುಣ್ಣಿಮೆಯಿಂದ ಉಕ್ಕೇರುವ ಸಮುದ್ರದ ಅಲೆಗಳ ಹಾಗೆ ಎಲ್ಲಿಂದಲ್ಲೇ ಹರಿಯುತ್ತಿರುವ ಮನಸ್ಸನ್ನು ನಿಂತ ನೀರಾಗಿಸುವ ಬರಹಗಳು ಇನ್ನೊಂದಿಷ್ಟು . ದಣಿವಾದ ಪಯಣಿಗನಿಗೆ ಮುದವಾದ ತಂಪನ್ನೆರೆಯುವ ತಂಗುದಾಣಗಳಂತೆ ಬರಹಗಳು ಮತ್ತೊಂದಿಷ್ಟು .
ನೆಟ್ ಲೋಕದಲ್ಲಿ ಅಲೆದಾಡಿ ಪಯನಿಗನಂತೆ ಬಂದ ನಿಮಗೆ "ಮುರಡಿ ತಂಗುದಾಣಕ್ಕೆ" ಆದರದ ಸ್ವಾಗತ. ನನ್ನ ಬರಹಗಳು ನಿಮ್ಮ ಮುಖದಲ್ಲೀ ಕ್ಷಣವಾದರೂ ಮಂದಹಾಸವನ್ನು ಮೂಡಿಸುವ ನಂಬಿಕೆಯಿಂದ ಈ ಅಂಕಣವನ್ನು ನಿಮಗಾಗಿ ಮಿಸಲಿಟ್ಟಿದ್ದೇನೆ .

1 comment:

  1. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ...

    ReplyDelete